ಕನ್ನಡ ವಿಭಾಗದ ಕಲಾ ಪಯಣ ಕನ್ನಡ ಸಂಘದ ವತಿಯಿಂದ ಅತಿಥಿ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಶ್ರೀನಿವಾಸ ಎಸ್, ಸಹಾಯಕ ಪ್ರದ್ಯಾಪಕರು ಮತ್ತು ವಿಭಾಗ ಮುಖ್ಯಸ್ಥರು ಬಂಗಾರು ತಿರುಪತಿ ಕೆ.ಜಿ.ಫ್ ಕೋಲಾರ ಇವರು ‘ಸ್ಪರ್ಧಾತ್ಮಕ ಜಗತ್ತಿನಲ್ಲಿ ಕನ್ನಡ ಭಾಷೆ ‘ ಈ ವಿಷಯದ ಬಗ್ಗೆ ಅತ್ಯುತ್ತಮವಾದ ಸಂಶೋಧನಾತ್ಮಕ ಉಪನ್ಯಾಸವನ್ನು ಕೊಟ್ಟರು. ವಿದ್ಯಾರ್ಥಿಗಳು ಈ ಉಪನ್ಯಾಸದಿಂದ ಹೆಚ್ಚಿನ ಮಾಹಿತಿಯನ್ನು ಗ್ರಹಿಸಿದರು. ಶ್ರೀನಿವಾಸ ಎಸ್ ರವರಿಗೆ ಕಾಲೇಜಿನ ಪ್ರಾಂಶುಪಾಲರಾದ ರೆವರೆಂಟ್ ಫಾ. ದಾ. ಮರ್ವಿನ್ ಪಾಲ್ ಫ್ರಾಂಕ್ ರವರು ಸನ್ಮಾನವನ್ನು ಮಾಡಿ ಗೌರವಿಸಿದರು.